      ಮೂಲದೊಡನೆ ಪರಿಶೀಲಿಸಿ

ಕಾರ್ಬನಿಫೆರಸ್ ಸ್ತೋಮ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಉತ್ತರ ಪೇಲಿಯೋeóÉೂೀಯಿಕ್ ಕಲ್ಲುಗಳು ಮತ್ತು ಕಾಲದ ಒಂದು ಪ್ರಮುಖ ವಿಭಾಗ. ಇಂಗ್ಲೆಂಡಿನಲ್ಲಿ ಕಲ್ಲಿದ್ದಲನ್ನು ಒಳಗೊಂಡ ಸ್ತರಗಳನ್ನು ಕಲ್ಲಿದ್ದಲು ಸ್ತರಗಳು ಎಂದು ಬಹಳ ಕಾಲದ ವರೆಗೆ ಕರೆಯುತ್ತಿದ್ದರು. ಕೋನಿಬೇರ್ ಮತ್ತು ಫಿಲಿಪ್ಸ್ ಎಂಬುವರು ಹಳೆ ಕೆಂಪು ಮರಳು ಶಿಲೆಗಳ ಸಮೇತ ಕಲ್ಲಿದ್ದಲು ಸ್ತರಗಳನ್ನು ಒಳಗೊಂಡ ಶಿಲಾರಾಶಿಗೆ ಕಾರ್ಬನಿಫೆರಸ್ ಸ್ತೋಮಗಳು ಎಂಬ ಹೆಸರನ್ನು ಕೊಟ್ಟರು (1822). ಅದರೆ 1839ರಲ್ಲಿ ಹಳೆ ಕೆಂಪು ಮರಳು ಶಿಲೆಗಳನ್ನು ಕಾರ್ಬನಿಫೆರಸ್ ಸ್ತೋಮಗಳಲ್ಲಿ ಕಲ್ಲಿದ್ದಲು ಶೇಖರಗೊಂಡಿದ್ಧರೂ ಪ್ರಪಂಚದ ಎಲ್ಲ ಮುಖ್ಯ ಕಲ್ಲಿದ್ದಲು ಗಣಿಗಳಿಗೂ ಕಾರ್ಬನಿಫೆರಸ್ ಸ್ತೋಮಗಳಿಗೇ ಸೀಮಿತಗೊಂಡಿವೆ. ಆದ್ದರಿಂದಲೇ ಕಾರ್ಬನಿಫೆರಸ್ ಮತ್ತು ಪರ್ಮಿಯನ್ ಶಿಲಾಸ್ತೋಮಗಳನ್ನು ಒಟ್ಟು ಸೇರಿಸಿ ವಾಗನ್ ಎಂಬಾತ ಅಂತ್ರ ಕೊಲಿಥಿಕ್ ಸ್ತೋಮಗಳು ಎಂದು ಕರೆದಿದ್ದಾನೆ. ವಾಸ್ತವವಾಗಿ ಕಾರ್ಬನಿಫೆರಸ್ ಮತ್ತು ಪರ್ಮಿಯನ್ ಸ್ತೋಮಗಳ ಮಧ್ಯೆ ಎರಡಕ್ಕೂ ಸೇರಿದ ಮಧ್ಯಕಾಲದ ಪದರಗಳು ಇವೆ. ಈ ಪದರುಗಳನ್ನು ಪರ್ಮೊಕಾರ್ಬನಿಫೆರಸ್ ಪದರಗಳೆಂದು ಕರೆದಿರುವುದೇ ಈ ಎರಡು ಸ್ತೋಮಗಳನ್ನು ನಿಖರವಾಗಿ ಬೇರ್ಪಡಿಸಲು ಆಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದೇ ರೀತಿ ಡೆವೋನಿಯನ್ ಕಾರ್ಬನಿಫೆರಸ್ ಮಧ್ಯಯೂ ಅನನುರೂಪ್ಯತೆ ಕಂಡುಬರುವುದಿಲ್ಲ.

 ಇಂಗ್ಲೆಂಡಿನಲ್ಲಿ ಕಾರ್ಬನಿಫೆರಸ್ ಸ್ತೋಮಗಳನ್ನು ಪರ್ವತ ಸುಣ್ಣಶಿಲೆ, ಮಿಲ್‍ಸ್ಟೋನ್‍ಗ್ರಿಟ್ ಮತ್ತು ಕಲ್ಲಿದ್ದಲು ಸ್ತರಗಳೆಂದು ಮೂರು ಭಾಗಗಳಾಗಿ ವಿಭಜಿಸಿರುತ್ತಾರೆ. ಈ ಸ್ತೋಮ ಕಾರ್ಬನಿಫೆರಸ್ ಯುಗದ ಪೂರ್ಣಕಾಲವನ್ನು ಪ್ರತಿಫಲಿಸುವುದಿಲ್ಲ. ಪಶ್ಚಿಮ ಯೂರೋಪ್, ರಷ್ಯ ಮತ್ತು ಭಾರತ ದೇಶಗಳಲ್ಲಿ ಇಂಗ್ಲೆಂಡಿನ ಕಲ್ಲಿದ್ದಲು ಸ್ತರಗಳಿಗಿಂತ ಕಿರಿಯ ವಯಸ್ಸಿನ ಶಿಲೆಗಳಿವೆ. ಈ ಪ್ರದೇಶಗಳಲ್ಲಿಯೂ ಶಿಲಾಸ್ತೋಮಗಳನ್ನು ಕೆಳ, ಮಧ್ಯ ಮತ್ತು ಮೇಲಣ ಎಂದು ಮೂರು ಭಾಗಗಳನ್ನಾಗಿ ವಿಭಜಿಸಿರುತ್ತಾರೆ. ಇಂಗ್ಲೆಂಡಿನ ಕಾರ್ಬನಿಫೆರಸ್ ಸ್ತೋಮಗಳು ಈ ಪ್ರದೇಶಗಳ ಕೆಳ ಮತ್ತು ಮಧ್ಯಭಾಗಗಳಿಗೆ ಸರಿದೂಗುತ್ತವೆ. ಉತ್ತರ ಅಮೆರಿಕದಲ್ಲಿ ಈ ಕಾಲದ ಶಿಲಾರಾಶಿಯನ್ನು ಮಿಸ್ಸಿಸ್ಸಿಪಿಯನ್ ಸ್ತೋಮ ಮತ್ತು ಪೆನ್ಸಿಲ್ವೇನಿಯನ್ ಸ್ತೋಮ ಎಂದು ಎರಡು ಬೇರೆ ಸ್ತೋಮಗಳನ್ನಾಗಿಯೇ ಪರಿಗಣಿಸಿರುತ್ತಾರೆ. ಇವು ಕ್ರಮವಾಗಿ ಯೂರೋಪು ಮತ್ತು ರಷ್ಯದ ಕೆಳ ಮತ್ತು ಮಧ್ಯ ಭಾಗಗಳಿಗೆ ಸರಿದೂಗುತ್ತವೆ. ಏಷ್ಯ (ಭಾರತ) ಮತ್ತು ಆಸ್ಟ್ರೇಲಿಯಗಳಲ್ಲಿ ಕಾರ್ಬನಿ ಫೆರಸ್ ಮತ್ತು ಪರ್ಮಿಯನ್ ಸ್ತೋಮಗಳ ಮಧ್ಯೆ ಮಧ್ಯವರ್ತಿ ಪದರಗಳೂ ಇವೆ. ಇವಕ್ಕೆ ಪರ್ಮೊಕಾರ್ಬನಿಫೆರಸ್ ಪದರಗಳೆನ್ನುವರು.

 ಭಾರತದಲ್ಲಿ ಕಾರ್ಬನಿಫೆರಸ್ ಶಿಲೆಗಳು ಸ್ಪಿಟಿ ಮತ್ತು ಕಾಶ್ಮೀರ ಪ್ರದೇಶಗಳಲ್ಲಿ ಮತ್‍ಬೆಣಚುಶಿಲೆಯ ಮೇಲೆ ನಿಕ್ಷೇಪಗೊಂಡಿವೆ. ಈ ಸ್ತೋಮಗಳನ್ನು ಕನವಾರ ಸ್ತೋಮ ಎನ್ನುವರು. ಇದರ ದಪ್ಪ ಸುಮಾರು 4,000. ಈ ಸ್ತೋಮವನ್ನು ಕೆಳ ಮತ್ತು ಮೇಲಣ ಭಾಗಗಳಾಗಿ ವಿಭಜಿಸುತ್ತಾರೆ. ಕೆಳಭಾಗ ಸ್ಪಿಟಿ ಪ್ರದೇಶದ ಲಿಪಾಕ್ ನದಿ ಕಣಿವೆಯಲ್ಲಿ ಚೆನ್ನಾಗಿ ಹೊರಗೆ ಕಂಡಿರುವುದರಿಂದ ಇದನ್ನು ಲಿಪಾಕ್ ಶಿಲಾಶ್ರೇಣಿಗಳೆನ್ನುವರು. ಇದರಲ್ಲಿ ಸುಣ್ಣಶಿಲೆ ಮತ್ತು ಜೇಡುಶಿಲೆಗಳಿವೆ. ಮೇಲಣ ಭಾಗದಲ್ಲಿ ಬೆಣಚುಶಿಲೆ ಮತ್ತು ಜೇಡುಶಿಲೆಗಳೇ ಹೆಚ್ಚು. ಇವನ್ನು ಪೊಶ್ರೇಣಿ ಎನ್ನುವರು. ಇವುಗಳಲ್ಲಿ ಬ್ರಿಯೋಜೋವ ಗುಂಪಿನ ಫೆನೆಸ್ಟೆಲ್ಲಾ ಮತ್ತು ಪ್ರೋಟೊರೆಟಿಪೊರೆ ಪ್ರಾಣಿಗಳ ಅವಶೇಷಗಳು ವಿಶೇಷವಾಗಿವೆ. ಕಾಶ್ಮೀರದಲ್ಲಿ ಈ ಕಾಲದ ಶಿಲೆಗಳನ್ನು ಸಿರಿಂಗಥೀರಿಸ್ ಸುಣ್ಣಶಿಲೆ ಮತ್ತು ಫೆನೆಸ್ಟೆಲ್ಲಾ ಜೇಡುಶಿಲೆ ಎಂಬ ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಇವು ಕ್ರಮವಾಗಿ ಲಿಪಾಕ್ ಮತ್ತು ಪೊಶ್ರೇಣಿಗಳಿಗೆ ಸರಿದೂಗುತ್ತವೆ.

 ಕಾರ್ಬನಿಫೆರಸ್ ಯುಗದ ಅಂತ್ಯಕಾಲದಲ್ಲಿ ಪ್ರಪಂಚದ ಅನೇಕ ಕಡೆಗಳಲ್ಲಿ ಮಹತ್ತರ ಬದಲಾವಣೆಗಳಾದುವು. ನೆಲಜಲಗಳ ಪುನರ್‍ವರ್ಗೀಕರಣವಾಯಿತು. ಈ ಕಾರ್ಯಕ್ಕೆ ಸಂಬಂಧಿಸಿದಂತೆ ಪರ್ವತ ಕಾರ್ಯಾಚರಣೆ ನಡೆಯಿತು. ಆಗ ಉದಯಿಸಿದ ಪರ್ವತಗಳಲ್ಲಿ ಹರ್ಷೀನಿಯನ್ ಪರ್ವತ ಮುಖ್ಯವಾದುದು. ಆದ್ದರಿಂದ ಈ ಪರ್ವತ ಕಾರ್ಯವನ್ನು ಹರ್ಷೀನಿಯನ್ ಪ್ರಳಯವೆಂದು ಕರೆಯುತ್ತೇವೆ. ಇದರ ತರುವಾಯ ಪ್ರಪಂಚದ ನೆಲವೆಲ್ಲ ಎರಡು ಖಂಡಗಳಾಗಿತ್ತು. ಇವೆರಡರ ಮಧ್ಯೆ ಹೆಚ್ಚು ಕಡಿಮೆ ಭೂಮಧ್ಯ ಭಾಗದಲ್ಲಿ ಒಂದು ಸಾಗರವಿತ್ತು. ಇದಕ್ಕೆ ಟೆತಿಸ್ ಸಾಗರ ಎಂದು ಹೆಸರು. ಟೆತಿಸ್ ಸಾಗರಕ್ಕೆ ಉತ್ತರದಲ್ಲಿದ್ದ ಖಂಡ ಯೂರೇಷ್ಯ, ಗ್ರೀನ್‍ಲೆಂಡ್ ಮತ್ತು ಉತ್ತರ ಅಮೆರಿಕಗಳಿಂದ ಕೂಡಿತ್ತು. ಇದಕ್ಕೆ ಅಂಗಾರ ಖಂಡ ಅಥವಾ ಯೂರೇಷ್ಯನ್ ಖಂಡ ಎಂದು ಹೆಸರು. ದಕ್ಷಿಣ ಖಂಡ ಆಫ್ರಿಕ, ದಕ್ಷಿಣ ಅಮೆರಿಕ, ಭಾರತ ಪರ್ಯಾಯದ್ವೀಪಭಾಗ, ಆಸ್ಟ್ರೇಲಿಯ ಮತ್ತು ಅಂಟಾಟಿರ್ಕ್‍ಕಗಳನ್ನು ಒಳಗೊಂಡಿತ್ತು. ಈ ಖಂಡಕ್ಕೆ ಗೊಂಡವಾನಖಂಡ ಎಂದು ಹೆಸರು. ಪರ್ಮೊಕಾರ್ಬನಿಫೆರಸ್ ಕಾಲದಲ್ಲಿ ಗೊಂಡವಾನಖಂಡದಲ್ಲಿ ತೀವ್ರ ಶೀತವಾಯುಗುಣವಿತ್ತು. ಈ ಖಂಡದ ಬಹುಭಾಗ ನೀರ್ಗಲ್ಲು ನದಿಗಳಿಂದ ಆವರಿಸಲ್ಪಟ್ಟಿತು. ಭಾರತ ಪರ್ಯಾಯ ದ್ವೀಪದ ತಾಲ್ವೀರ್, ಸಾಲ್ಟ್‍ರೇಂಜ್, ಕಾಶ್ಮೀರದ ಹಜಾರಾ, ಘರ್‍ವಾಲ್ ಮತ್ತು ಸಿಮ್ಲ ಮುಂತಾದ ಕಡೆಗಳಲ್ಲಿ ನೀರ್ಗಲ್ಲುನದಿಯ ಕಾರ್ಯದ ಗುರುತುಗಳಿಂದ ಕೂಡಿದ ಗುಂಡು ಶಿಲಾನಿಕ್ಷೇಪವಾಗಿದೆ.

 ಸಾಲ್ಟ್‍ರೇಂಜ್ ಪ್ರದೇಶದಲ್ಲಿ ಕೇಂಬ್ರಿಯನ್ ಯುಗದ ತರುವಾಯ ಶಿಲಾನಿಕ್ಷೇಪ ಕಾರ್ಯ ನಿಂತು ಮತ್ತೆ ಈ ಗುಂಡುಶಿಲೆಯಿಂದ ಆರಂಭವಾಗಿದೆ. 150' ದಪ್ಪದ ಈ ಗುಂಡುಶಿಲೆಯಲ್ಲಿ ಹಳದಿ, ಹಸಿರು ಮತ್ತು ಬಿಳಿ ಚುಕ್ಕೆಗಳುಳ್ಳ ಮರಳುಶಿಲೆ ಇದೆ. ಇದರ ತಳದಲ್ಲಿ ಯೂರಿಡೆಸ್ಮಿ ಎಂಬ ಪ್ರಾಣಿಯ ಅವಶೇಷಗಳಿವೆ. ಚುಕ್ಕೆ ಮರಳುಶಿಲೆಗಳು ರಷ್ಯದ ಯುರೇಲಿಯನ್ ಶಿಲಾಶ್ರೇಣಿಗೆ ಸಮದೂಗುವುದು. ಪ್ರಪಂಚದ ವಿವಿಧ ಪ್ರದೇಶಗಳ ಕಾರ್ಬನಿಫೆರಸ್ ಸ್ತೋಮಗಳ ಸಮತೋಲನಪಟ್ಟಿ ಈ ರೀತಿ ಇದೆ.

 

ಶ್ರೇಣಿಗಳು

sÁ್ರನ್ಸ್ ಮತ್ತು

ಬೆಲ್ಜಿಯಂ

ಬ್ರಿಟನ್

ಅಮೆರಿP

ಸಂಯುಕ್ತ ಸಂಸ್ಥಾನ

ರಷ್ಯ

sgv

ಯುರೇಲಿಯನ್

(ಮೇಲ್ಭಾU)

ಸ್ಟೆಪೇನಿಯನ್

    

ಯುರೇಲಿಯನ್

ಆಲಿವ್ ಜೇಡುಶಿಲೆ

ಚುಕ್ಕೆ ಮರುಳುಶಿಲೆ

ನೀರ್ಗಲ್ಲು ಗಂಡುಶಿಲೆ

ಮಸ್ಕೊವಿಯನ್

(ಮಧ್ಯ¨sU)

ವೆಸ್ಟ್‍ಫಾಲಿಯನ್

ನಮೂರಿಯನ್

ಕಲಿದ್ದಲು ಸ್ತgಗಳು ಮಿಲ್ ಸ್ಟೋನ್‍ಗಿm

ಪೆನ್ಸಿಲ್ವೇನಿಯನ್

ಮಾಸ್ಕೊವಿಯನ್

  ಪೊಶ್ರೇಣ

   ಪೆನೆಸ್ಟೆಲ್ಲಾ         

   ಜೇಡುಶಿಲೆ,      

   ತಾಬುಪಾz

ಡೈನಾಂಟಯನ್

(ಕೆಳಭಾಗ)

ಡೈನಾಂಟಿಯನ್

ಪರ್ವತಸುಣ್ಣಶಿಲೆ

ಅಪೊನಿಯನ್

ಮಿಸ್ಸಿಸಿಪಿಯನ್

ಕಲ್ಮ್

  

ಲಿಪಾಕ್‍ಶ್ರೇಣ ಮತ್ತು ರಿಂUಥಿರಸ್ ಸುಣ್ಣಶಿಲೆ

 

 ಕಾರ್ಬನಿಫೆರಸ್ ಸ್ತೋಮಗಳಲ್ಲಿ ಸಸ್ಯಾವಶೇಷಗಳು ಹೇರಳವಾಗಿವೆ. ಈ ಸಸ್ಯವರ್ಗ ಪ್ರಪಂಚದ ಮುಕ್ಕಾಲುಭಾಗದ ಕಲ್ಲಿದ್ದಲಿನ ಅಕರವಾಗಿರುವುದರಿಂದ (ಈಗಿನ ಸಸ್ಯವರ್ಗವನ್ನುಳಿದು) ಸಸ್ಯವರ್ಗದ ವಿಚಾರವಾಗಿ ಗೊತ್ತಿಲ್ಲದಿರುವುದರಿಂದ ಎಲ್ಲರ ಗಮನವನ್ನೂ ಸೆಳೆಯುತ್ತದೆ. ಈ ಕಾಲದ ಅನೇಕ ಸಸ್ಯಗಳನ್ನು ಈಗಿನ ಜಾತಿಗಳಿಗೆ ಸೇರಿಸಬಹುದು. ಆದರೆ ಅವು ಈಗಿರುವ ಜೀವಂತ ಸಂಬಂಧಿಗಳಿಗಂತ ಬಹು ದೊಡ್ಡವು. ವಾಸ್ತವವಾಗಿ ಅವು ಆಯಾ ವರ್ಗಗಳ ದೈತ್ಯಗಳೆಂದೇ ಹೇಳಬಹುದು. ಕಾರ್ಬನಿಫೆರಸ್ ಯುಗದ ಗಣ್ಯಸಸ್ಯಗಳಿಂದರೆ ಕೆಲಮೈಟಿಸ್, ಲೆಪಿಡೊಡೆಂಡ್ರಾಸ್ ಮತ್ತು ಸಿಜಿಲೇರಿಯಗಳು. ಕೆಲಮೈಟಿಸ್ನ ಕಾಂಡದಲ್ಲಿ ಗೆಣ್ಣುಗಳೂ ಗೆಣ್ಣಿನ ಮಧ್ಯಭಾಗದಲ್ಲಿ ದಿಂಡುಗಳೂ ಇವೆ. ಅದರ ಎಲೆಗಳು ಒಂದೊಂದು ಪ್ರಕಾರದಲ್ಲಿಯೂ ಒಂದೊಂದು ರೀತಿ ಇವೆ. ಅವನ್ನು ಅನ್ಯುರೇರಿಯ ಅಸ್ಟೆರೊಫಿಲ್ಲೈಟಸ್ ಇತ್ಯಾದಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದೆ. ಲೆಪಿಡಿಂಡ್ರಾನ್ ಮತ್ತು ಸಿಜಿಲೇರಿಯಗಳು ಬಹು ಎತ್ತರವಾದ ಗಿಡಗಳಾಗಿದ್ದುವು. ಅವುಗಳ ಕಾಂಡಗಳ ಮೇಲೆಲ್ಲ ಎಲೆಗಳ ತೊಟ್ಟಿನ ಗುರುತುಗಳಿವೆ. ಈ ಎರಡು ಗಿಡಗಳ ಬೇರುಗಳು ಒಂದೇ ರೀತಿಯಾಗಿವೆ. ಅವುಗಳಿಗೆ ಸ್ಟಿಗ್ಮೇರಿಯ ಎಂದು ಹೆಸರು. ಕಾರ್ಬನಿಫೆರಸ್ ಕಾಲದ ಫರ್ನ್‍ಗಳು ಗಾತ್ರ, ಹೊರರೊಪ, ಎಲೆಗಳು ಸುರುಳಿ ಸುತ್ತಿರುವ ರೀತಿ ಮತ್ತು ಲೈಂಗಿಕಾಂಗಗಳೇ ಮೊದಲಾದ ಅನೇಕ ವಿಚಾರಗಳಲ್ಲಿ ಜೀವಂತ ಫರ್ನ್‍ಗಳನ್ನು ಹೋಲುತ್ತವೆ. ಆದರೆ ಕೆಲವು ಫರ್ನ್‍ಗಳು ಬೀಜಬಿಡುವ ಜಾತಿಯವುಗಳಾಗಿವೆ. ಇವುಗಳಿಗೆ ಟೆರಿಡೊಸ್ಟರ್ಮ್‍ಗಳೇ ಹೆಚ್ಚಾಗಿದ್ದುವೆಂದು ಹೇಳಬಹುದು. ರ್ಯಾಕಾಪ್ಟರಿಸ್, ಸೈಕ್ಲಾಪ್ಟರಿಸ್, ಓಡಂಟಾ ಪ್ಟರಿಸ್, ನ್ಯೂರಾಪ್ಟರಿಸ್, ಸ್ಟಿನಾಪ್ಟರಿಸ್, ಪೆಕಾಪ್ಟರಿಸ್ ಮತ್ತು ಅಲಿತಾಪ್ಪರಿಸ್ಗಳು ಮುಖ್ಯ ಟರಿಡೊಸ್ಟರ್ಮ್‍ಗಳು, ಪಿಟಸ್ ಮತ್ತು ಡ್ಯಾಡೊಕ್ಸೈಲಾನ್‍ಗಳು ಫರ್ನ್‍ಮರಗಳು. ಈ ಕಾಲದ ಮತ್ತೊಂದು ವಿಶಿಷ್ಟ ಸಸ್ಯವೆಂದರೆ ಕಾರ್ಡೈಟಿಸ್. ಇದರಲ್ಲಿ ಸೈಕ್ಯಾಡ್ ಮತ್ತು ಕೋನಿಪೆರಗಳೆರಡರ ಲಕ್ಷಣಗಳೂ ಇವೆ. ಇದರ ಎಲೆಗಳಲ್ಲಿ ಸಮಾಂತರ ಪತ್ರನರಗಳಿವೆ.

 ವಿವಿಧ ವರ್ಗಗಳಿಗೆ ಸೇರಿದ ಸಾಗರವಾಸಿ ಜೀವಿಗಳು ಹೇರಳವಾಗಿದ್ದುವು. ಆಗ ಪೊರಮಿನಿಫೆರಗಳು ಎಷ್ಟು ಹೆಚ್ಚಾಗಿದ್ದುವೆಂದರೆ ಅವುಗಳ ಅವಶೇಷರಾಶಿಗಳಿಂದಲೇ ಕೆಲವು ಸುಣ್ಣಶಿಲೆಗಳ ಸಂಚಯನವಾಗಿದೆ. ಇವುಗಳಲ್ಲಿ ಬ್ರಿಟನ್ ಮತ್ತು ಬೆಲ್ಜಿಯಂಗಳಲ್ಲಿ ಸಕ್ಕಮೈನ ಸುಣ್ಣಶಿಲೆ ಮತ್ತು ವಾಲ್ವುಲೈನ ಸುಣ್ಣಶಿಲೆಯೂ ಮುಖ್ಯವಾದವು. ಇವಲ್ಲದೆ ಲ್ಯಾಜಿನ, ನೋಡೋಸೇರಿಯ ಎಂಡೊತೈರ ಟೆಕ್ಸುಟುಲೇರಿಯ ಮತ್ತು ಸ್ಕ್ವಾಗೆರೈನಗಳು ಈ ಕಾಲದ ಪೊರಮಿನಿಫೆರಗಳಲ್ಲಿ ಮುಖ್ಯವಾದವು.

 ಈ ಕಾಲದಲ್ಲಿ ರೂಗೋಸ ಮತ್ತು ಟ್ಯಾಬುಲೇಟ ಎಂಬ ಎರಡು ಹವಳಶಾಖೆಗಳು ಇದ್ದುವು. ಸಿರಿಂಗಪೋರ ಮತ್ತು ಪೇವೊಸೈಟಸ್‍ಗಳೆರಡೇ ಮುಖ್ಯ ಟ್ಯಾಬುಲೇಟ ಹವಳಗಳಾದರೂ ಅವು ರೂಗೊಸ ಹವಳಗಳಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದುವು. ಝಪ್ರೆಂಟಸ್, ಸಯತೋಫಲ್ಲಂ, ಆಲೊಫೊಲ್ಲಂ, ಲಿತೊಸ್ಟ್ರೋಷನ್ ಮತ್ತು ಲ್ಯಾನ್ಸ್ ಡೇಲಿಯಗಳು ಮುಖ್ಯವಾದ ರೂಗೋಸ ಹವಳಗಳು. ಕೊನೆಯ ಎರಡು ಹವಳಗಳ ಉದಯ ಭೂ ಇತಿಹಾಸದಲ್ಲಿ ಗಮನ ಸೆಳೆಯುವ ಅಂಶವಾಗಿದೆ. ಕಾರ್ಬನಿಫೆರಸ್ ಸ್ತೋಮವನ್ನು ಶಿಲಾಪಾದಗಳನ್ನಾಗಿ ವಿಭಜಿಸಲು ಹವಳಗಳು ಸಹಕಾರಿಯಾಗಿವೆ.

 ಬ್ರೇಕಿಯೋಪೋಡಗಳು ಸಹ ಆ ಕಾಲದಲ್ಲಿ ಹೇರಳವಾಗಿಯೇ ಇದ್ದುವು. ಅತಿಯಾಗಿ ಉಬ್ಬಿದ ಕೆಳ ಮತ್ತು ಅಷ್ಟೇ ಗುಳಿಬಿದ್ದ ಮೇಲ್ಚಿಪ್ಪು ಹೊಂದಿದೆ ಪ್ರೊಡಕ್ಟಸ್ ಈ ಕಾಲದ ವಿಶಿಷ್ಟ ಬ್ರೇಕಿಯೋಪೋಡವಾಗಿತ್ತಲ್ಲದೆ ಅದಕ್ಕೆ ವಿಶಾಲ ಭೌಗೋಳಿಕ ವ್ಯಾಪ್ತಿ ಸಹ ಇತ್ತು. ಸ್ಟಿರಿಫೆರ, ಸಿರಿಂಗೊತೀರಿಸ್, ಕಾನೆಟಸ್, ಡಿಯಾಲಾಸ್ಮ ಮತ್ತು ಲಿಂಗ್ಯುಲಗಳು ಹೇರಳವಾಗಿದ್ದುವು. ಎಕಿನಾಯಿಡ್‍ಗಳು ಸಿಡಾರಿಸ್‍ನ ಸಾದಾ ಪ್ರಕಾರಗಳಿಂದ ಪ್ರತಿನಿಧಿತವಾಗಿದ್ದುವು. ಕ್ರೈನಾಯಿಡ್‍ಗಳಿಗೆ ಅಸಾಧಾರಣವಾಗಿ ಅಧಿಕವಾಗಿದ್ದುದನ್ನು ಅವುಗಳ ಅವಶೇಷಗಳಿಂದ ಸಂಚಯನಗೊಂಡ ಸುಣ್ಣಶಿಲೆಗಳೂ ವ್ಯಕ್ತಪಡಿಸುತ್ತವೆ. ಬ್ಲಾಸ್ಟಾಯಿಡ್‍ಗಳು ವಿಕಾಸದ ಉನ್ನತ ಶಿಖರವನ್ನು ಮುಟ್ಟಿದ್ದುವು. ಪೆಂಟ್ರಿಮೈಟಿಸ್ ಮತ್ತು ಕೋಡಾಸ್ಟರ್ ಅವುಗಳಲ್ಲಿ ಮುಖ್ಯವಾದುದು. ಬೆಲೆರಪಾನ್, ಯೋರಿಡೆಸ್ಮಗಳು ಈ ಕಾಲದಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದ ಶಂಖಗಳು.

(ಡಿ.ಆರ್.)